ನಿಖಿಲ್ ಎಲ್ಲಿದ್ದೀಯಪ್ಪ ?
ಇಲ್ಲೇ ಇದ್ದೀನಪ್ಪಾ
ನಿಮ್ಮ ಹಿಂದುಗಡೆಯ ಉದ್ದ ಸಾಲಿನ
ಕೊನೆಯ ತುದಿಯಲ್ಲಿ ನಿಂತು
ನಾಮಪತ್ರ ಅರ್ಜಿ ತುಂಬುತ್ತಾ ಇದ್ದೇನಪ್ಪ
ಅಜ್ಜ, ದೊಡ್ಡಪ್ಪ, ಅಮ್ಮ, ದೊಡ್ಡಮ್ಮ, ಅಣ್ಣ ....
ಹೀಗೆ ಸಾಲು ತುಂಬಾ ಉದ್ದ ಇದೆಯಪ್ಪ
ಅವರ ಜೊತೆಗೆ ನಾನೂ ಇದ್ದೇನಪ್ಪ ...
ಇಲ್ಲೇ ಇದ್ದೀನಪ್ಪಾ
ನಿಮ್ಮ ಹಿಂದುಗಡೆಯ ಉದ್ದ ಸಾಲಿನ
ಕೊನೆಯ ತುದಿಯಲ್ಲಿ ನಿಂತು
ನಾಮಪತ್ರ ಅರ್ಜಿ ತುಂಬುತ್ತಾ ಇದ್ದೇನಪ್ಪ
ಅಜ್ಜ, ದೊಡ್ಡಪ್ಪ, ಅಮ್ಮ, ದೊಡ್ಡಮ್ಮ, ಅಣ್ಣ ....
ಹೀಗೆ ಸಾಲು ತುಂಬಾ ಉದ್ದ ಇದೆಯಪ್ಪ
ಅವರ ಜೊತೆಗೆ ನಾನೂ ಇದ್ದೇನಪ್ಪ ...
ಇಲ್ಲೇ ಇದ್ದೀನಪ್ಪಾ
ಪ್ರಚಾರ ಡೈಲಾಗ್ ಉರು ಹೊಡೆಯುತ್ತಾ
ಸ್ಕ್ರಿಪ್ಟ್ ತುಂಬಾ ಉದ್ದ ಇದೆಯಪ್ಪ
ಇದಕ್ಕಿಂತ ಸಿನೆಮಾನೇ ವಾಸಿ ಅಪ್ಪ
ಅಲ್ಲಿ ಡ್ಯೂಪ್, ಡಬ್ಬಿಂಗ್ ವ್ಯವಸ್ಥೆ ಆದರೂ ಇದೆಯಪ್ಪ
ಪ್ರಚಾರ ಡೈಲಾಗ್ ಉರು ಹೊಡೆಯುತ್ತಾ
ಸ್ಕ್ರಿಪ್ಟ್ ತುಂಬಾ ಉದ್ದ ಇದೆಯಪ್ಪ
ಇದಕ್ಕಿಂತ ಸಿನೆಮಾನೇ ವಾಸಿ ಅಪ್ಪ
ಅಲ್ಲಿ ಡ್ಯೂಪ್, ಡಬ್ಬಿಂಗ್ ವ್ಯವಸ್ಥೆ ಆದರೂ ಇದೆಯಪ್ಪ
ಗ್ಲಿಸರಿನ್ ಇಲ್ಲದೆ
ಅಳುವುದು ಮಾತ್ರ
ತುಂಬಾ ಕಷ್ಟ ಅಪ್ಪ
ಅಳುವುದಕ್ಕೆ ಗೊತ್ತಿಲ್ಲದವ
ಆಳುವುದಕ್ಕೆ ಅನರ್ಹ ಎಂದು
ಅಜ್ಜ ಹೇಳಿದ್ದಾರೆ
ಇದು ನಿಜವೇನಪ್ಪ ?
ಅಳುವುದು ಮಾತ್ರ
ತುಂಬಾ ಕಷ್ಟ ಅಪ್ಪ
ಅಳುವುದಕ್ಕೆ ಗೊತ್ತಿಲ್ಲದವ
ಆಳುವುದಕ್ಕೆ ಅನರ್ಹ ಎಂದು
ಅಜ್ಜ ಹೇಳಿದ್ದಾರೆ
ಇದು ನಿಜವೇನಪ್ಪ ?
*******